ವಿಟಮಿನ್ ಡಿ ಕೊರತೆಯ ಲಕ್ಷಣಗಳು ಹಾಗೂ ವಿಟಮಿನ್ ಡಿ ಇರುವ ಆಹಾರಗಳು

ನಮ್ಮ ದೇಹ ಉತ್ಪತ್ತಿ ಮಾಡುವ ವಿಟಮಿನ್ ಅಂದರೆ ಅದು ವಿಟಮಿನ್ ಡಿ. ಸೂರ್ಯನ ಕಿರಣಗಳು ನಮ್ಮ ದೇಹದ ಮೇಲೆ ಬಿದ್ದಾಗ ವಿಟಮಿನ್ ಡಿ ಉತ್ಪತ್ತಿಯಾಗುತ್ತದೆ. ಆದರೆ ಈಗೀನ ಲೈಫ್‌ಸ್ಟೈಲ್‌ನಲ್ಲಿ ಎಷ್ಟೋ ಜನರು ಸೂರ್ಯನ ಬೆಳಕಿಗೆ ಹೋಗುವುದೇ ಇಲ್ಲ.

ನೈಟ್‌ ಶಿಫ್ಟ್‌ನಲ್ಲಿ ಕೆಲಸ ಮಾಡುವವರು ಸೂರ್ಯ ಮುಳುಗುವಾಗ ಎದ್ದರೆ, ಸೂರ್ಯ ಉದಯಿಸುವಾಗ ಮಲಗುತ್ತಾರೆ, ಇಂಥವರ ಮೇ ಮೇಲೆ ಸೂರ್ಯನ ಕಿರಣಗಳು ಸೋಕುವುದೇ ಇಲ್ಲ. ಶೇ.50ರಷ್ಟು ಜನರು ಸೂರ್ಯನ ಕಿರಣಗಳಿಗೆ ಮೈಯೊಡ್ಡುವುದೇ ಇಲ್ಲ, ಇದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ ಉತ್ಪತ್ತಿಯಾಗದೆ, ವಿಟಮಿನ್ ಡಿ ಕೊರತೆ ಕಂಡು ಬರುವುದು.

ವಿಟಮಿನ್ ಡಿ ಎನ್ನುವುದು ನಮ್ಮ ದೇಹದಲ್ಲಿ ಹಾರ್ಮೋನ್‌ನಂತೆ ಕಾರ್ಯ ನಿರ್ವಹಿಸುತ್ತದೆ. ದೇಹದ ಪ್ರತಿಯೊಂದು ಕಣವೂ ವಿಟಮಿನ್ ಡಿಯನ್ನು ಹೀರಿಕೊಳ್ಳುತ್ತದೆ. ನಮ್ಮ ತ್ವಚೆಯ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಕೊಲೆಸ್ಟ್ರಾಲ್‌ನಿಂದ ವಿಟಮಿನ್ ಡಿ ಉತ್ಪತ್ತಿ ಮಾಡುತ್ತದೆ.

ವಿಟಮಿನ್ ಡಿ ಕೊರತೆಗೆ ಪ್ರಮುಖ ಕಾರಣಗಳು

* ಹೊರಗಡೆ ಹೋಗುವ ಸನ್‌ಸ್ಕ್ರೀನ್ ಲೋಷನ್ ಹಚ್ಚದೆ ಹೋಗುವುದಿಲ್ಲ ಎಂದಾದರೆ ನೀವು ಒಂದು ಅಂಶವನ್ನು ಗಮನಿಸಲೇಬೇಕು, ಸೂರ್ಯನ ಕಿರಣಗಳು ತ್ವಚೆಗೆ ತಾಗದಿದ್ದರೆ ವಿಟಮಿನ್‌ ಡಿ ಕೊರತೆ ಉಂಟಾಗುವುದು.

* ಮನೆಯೊಳಗೆ ಇರುವುದು ಕೂಡ ವಿಟಮಿನ್ ಡಿ ಕೊರತೆಗೆ ಪ್ರಮುಖ ಕಾರಣವಾಗಿದೆ.

ವಿಟಮಿನ್ ಡಿ ಇಲ್ಲದಿದ್ದರೆ ಡೇಂಜರ್

ವಿಟಮಿನ್ ಡಿ ಕೊರತೆ ಉಂಟಾದರೆ ಈ ಪ್ರಮುಖ ಲಕ್ಷಣಗಳು ಕಂಡು ಬರುತ್ತದೆ:

1. ಆಗಾಗ ಕಾಯಿಲೆ ಬೀಳುವುದು
ವಿಟಮಿನ್ ಡಿ ಕೊರತೆ ಉಂಟಾದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು, ನಮ್ಮ ದೇಹಕ್ಕೆ ರೋಗಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಕಡಿಮೆಯಾಗುವುದು. ಆಗಾಗ ಶೀತ, ಕೆಮ್ಮು ಸಮಸ್ಯೆ ಕಾಡುತ್ತಿದ್ದರೆ ವಿಟಮಿನ್ ಡಿ ಕೂಡ ಒಂದು ಕಾರಣವಿರಬಹುದು.
ವಿಟಮಿನ್ ಡಿ ಕೊರತೆಯಿಂದ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು.

ಮೂಳೆಗಳಲ್ಲಿ ನೋವು, ಬೆನ್ನು ನೋವು
ಮೂಳೆಗಳ ಆರೋಗ್ಯಕ್ಕೆ ವಿಟಮಿನ್ ಡಿ ಅವಶ್ಯಕ. ಇದು ಮೂಳೆಯು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮೂಳೆಗಳಲ್ಲಿ ನೋವು ಹಾಗೂ ಬೆನ್ನು ನೋವು ಡಿ ವಿಟಮಿನ್ ಕೊರತೆ ಉಂಟಾದರೆ ಉಂಟಾಗುವುದು.

ಈ ಸಮಸ್ಯೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಮಡು ಬರುತ್ತದೆ.

Leave a Reply

Your email address will not be published. Required fields are marked *